ಉತ್ತಮ ಪ್ರಪಂಚಕ್ಕಾಗಿ
ಉತ್ತಮ ಶಿಕ್ಷಣ
ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲು ಪಡುತ್ತಾನೆ ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು
ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆ ಬಗ್ಗೆ :
ಕೊಣನೂರು ಇತಿಹಾಸ ಪ್ರಸಿದ್ಧಿಯಾದ ಸ್ಥಳ, ಇದಕ್ಕೆ ಪೂರಕ ಎನ್ನುವಂತೆ ಸಾಕಷ್ಟು ದೇವಾಲಯಗಳು ಇರುವುದೇ ಇದಕ್ಕೆ ಸಾಕ್ಷಿ. ಈ ಊರಿಗೆ ಕೊಣನೂರು ಎಂದು ಹೆಸರು ಬರಲು ಕಾರಣವೆಂದರೆ ಕೊಳಲು ಗೋಪಾಲಕೃಷ್ಣ ದೇವಸ್ಥಾನವಿರುವುದರಿಂದ ಕೊಳಲೂರು ಎಂದು ಕರೆಸಿಕೊಳ್ಳುತ್ತಿದ್ದ ಈ ಪುಣ್ಯ ಸ್ಥಳ ತದನಂತರ ಕೊಣನೂರು ಎಂದು ಬದಲಾಯಿತು ಎಂಬುದು ಪ್ರತೀತಿ. ಪಕ್ಕದ ರಾಮನಾಥಪುರವನ್ನು ದಕ್ಷಿಣ ಕಾಶಿ ಎಂದು ಕರೆದರೆ ಕೊಣನೂರನ್ನು ವಿದ್ಯಾಕಾಶಿ ಎಂದು ಕರೆಯಲು ಬಹು ಹೆಮ್ಮೆ ಆಗುತ್ತದೆ. ಕುವೆಂಪುರವರ ಕವಿವಾಣಿಯಂತೆ ಕೊಣನೂರು ಸರ್ವಜನಾಂಗದ ಶಾಂತಿಯ ತೋಟದಂತೆ ಇಲ್ಲಿ ಎಲ್ಲರೂ ಸೌಹಾರ್ದತೆಯಿಂದ ವಾಸಿಸುತ್ತಿದ್ದಾರೆ. ಕೊಣನೂರು ಮೈಸೂರು ಒಡೆಯರ ನೇರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಒಡೆಯರ ಬಹುದೊಡ್ಡ ಕನಸಾದ ಸರ್ವರಿಗೂ ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿ ನೀಡಬೇಕೆಂಬ ಆಶಯದಂತೆ ಕ್ರಿ. ಶ. 1904 ರಲ್ಲಿ ಮೈಸೂರಿನ ದಿವಾನರಾಗಿದ್ದ ಪಿ. ಎನ್. ಕೃಷ್ಣಮೂರ್ತಿಯವರ ಅವಧಿಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ಆರಂಭದಲ್ಲಿ ಈ ಶಾಲೆಯನ್ನು ಮಾಧ್ಯಮಿಕ ಶಾಲೆಯನ್ನಾಗಿ ತೆರೆಯಲಾಯಿತು.. ಈಗಿರುವ ಶತಮಾನ ಪೂರೈಸಿರುವ ಶಾಲೆಗೆ ಸರ್. ಮಿರ್ಜಾ ಇಸ್ಮಾಯಿಲ್ ರವರು ಅಂದು ಕೊಣನೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಶಾಲೆಗೆ ನೀಲಿನಕಾಶೆ ತಯಾರಿಸಿ ಕಟ್ಟಡಕ್ಕೆ ಅಸ್ಥಿಭಾರ ಹಾಕಿಕೊಟ್ಟರು.

ಬಿ .ಎಸ್ .ಎಸ್ ಸರ್ಕಾರಿ ಪ್ರೌಢಶಾಲೆ ಬಗ್ಗೆ
ವಿದ್ಯಾಕಾಶಿ ಎಂದೇ ಪ್ರಸಿದ್ಧಿಯಾಗಿರುವ, ಪುಣ್ಯನದಿ ಜೀವನದಿ ಕಾವೇರಿ ಮಾತೆಯ ತಪ್ಪಲಲ್ಲಿರುವ ಕೊಣನೂರಿನಲ್ಲಿ ಐತಿಹಾಸಿಕ ಬಿ.ಎಸ್.ಎಸ್ ಸರ್ಕಾರಿ ಪ್ರೌಢಶಾಲೆಯು ದಿನಾಂಕ 13-07-1946ರಲ್ಲಿ ಸ್ಥಾಪನೆಯಾಯಿತು. ಈ ಶಾಲೆಯನ್ನು ಸ್ಥಾಪನೆ ಮಾಡಲು ಹಲವಾರು ದಾನಿಗಳು ಹಗಲಿರುಳು ಶ್ರಮಿಸಿ ಈ ಶಾಲೆಯನ್ನು ಸ್ಥಾಪಿಸಿದರು. ಈ ಶಾಲೆಯನ್ನು ಸ್ಥಾಪಿಸಲು ಬಿ. ಶಾಮಯ್ಯ ಶೆಟ್ಟರು ಮತ್ತು ಸಹೋದರು ಶಾಲೆಗೆ ಜಾಗವನ್ನು ದಾನವಾಗಿ ನೀಡಿದಲ್ಲದೆ ಹೆಚ್ಚಿನ ಧನ ಸಹಾಯ ಮಾಡಿದ್ದರಿಂದ ಈ ಶಾಲೆಗೆ ಅವರ ಹೆಸರನ್ನೆ ಬೆಳಗೊಡು ಶಾಮಯ್ಯ ಶೆಟ್ಟಿ ಸರ್ಕಾರಿ ಪ್ರೌಢಶಾಲೆ ಎಂದು ನಾಮಕರಣ ಮಾಡಲಾಯಿತು. ಇವರೊಂದಿಗೆ ಪಿ. ನಂಜಪ್ಪ ಶೆಟ್ಟರು, ಸಿ. ಗೋವಿಂದಪ್ಪ ಶೆಟ್ಟರು, ಬಿ. ಡಿ. ತಿರುಮಲ ಶೆಟ್ಟರು, ವೆಂಕಮ್ಮ ದೊಡ್ಡನಾರೀಸೂರ ಶೆಟ್ಟರು, ಕೆ. ಆರ್. ಪಟ್ಟಾಭಿರಾಮಯ್ಯನವರು, ಶ್ರೀ ರಾಮ ವಿಲಾಸ್ ಬೆಂಗಳೂರು, ಬಿ. ಪಿ. ಕೃಷ್ಣಯ್ಯ ಶೆಟ್ಟರು ಮತ್ತು ಸಹೋದರರು, ಬಿ. ಪಿ. ರಾಮಸ್ವಾಮಿ ಶೆಟ್ಟರು, ಜವರೇಗೌಡರು ಮತ್ತು ಸಹೋದರರು, ಸಿದ್ದಾಪುರದ ಮರಿಗೌಡರು, ಕೆ ಎಸ್ ಶಾಮಣ್ಣನವರು, ಕೆ ನಂಜಪ್ಪನವರು, ಬಿ. ಎಸ್. ವೆಂಕಟರಾಮಶೆಟ್ಟರು, ಡಿ. ಎಸ್. ಸುಬ್ಬರಾಯ ಶೆಟ್ಟರು, ಗೋಪಾಲಕೃಷ್ಣ ಕೋ ಆಪರೇಟಿವ್ ಸೊಸೈಟಿ, ಬಿ. ಎಸ್. ಸುಬ್ಬರಾಯ ಶೆಟ್ಟರು ಮತ್ತು ಕೆ. ವಿ. ವೆಂಕಟರಾಮಯ್ಯನವರು ಇವರುಗಳ ಸಹಾಯದೊಂದಿಗೆ ಶಾಲೆಯನ್ನು ಸ್ಥಾಪಿಸಲಾಯಿತು.
ಹಳೆಯ ವಿದ್ಯಾರ್ಥಿಗಳ ವೇದಿಕೆಯ ಬಗ್ಗೆ
ಕೊಣನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆ ಮತ್ತು ಬಿ.ಎಸ್.ಎಸ್ ಸರ್ಕಾರಿ ಪ್ರೌಢಶಾಲೆಗಳೂ ಅಸಂಖ್ಯಾತ ವಿದ್ಯಾರ್ಥಿಗಳ ಬಾಳಿಗೆ ದಾರಿದೀಪವಾಗಿ ಉತ್ತಮವಾದ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಇಂದು ಈ ಪ್ರಾಥಮಿಕ ಶಾಲೆಗೆ 120 ವರ್ಷ ಪ್ರೌಢಶಾಲೆಗೆ 78 ವರ್ಷ ಕಳೆದುಹೋಗಿವೆ. ಇಂತಹ ಶುಭ ಸಂದರ್ಭದಲ್ಲಿ ಉಭಯ ಶಾಲೆಗಳಿಗೆ ಶತಮಾನೋತ್ಸವ ಮತ್ತು ವಜ್ರ ಮಹೋತ್ಸವ ಕಾರ್ಯಕ್ರಮಗಳನ್ನು ಎಲ್ಲರ ಸಹಕಾರದೊಂದಿಗೆ ಮಾಡಲು ಹೊರಟಿರುವುದು ನಿಜವಾಗಲೂ ಅದ್ಭುತವಾದ ಕೆಲಸ ಎಂದು ಭಾವಿಸಿದ್ದೇವೆ. ನಾವುಗಳು ಈ ಮಹೋನ್ನತವಾದ ಕಾರ್ಯಕ್ರಮವನ್ನು ಮಾಡುವುದಕ್ಕಿಂತ ಮುಂಚೆ ಎಲ್ಲಾ ಹಳೆಯ ವಿದ್ಯಾರ್ಥಿಗಳ ಸಲಹೆ ಮತ್ತು ಸಹಕಾರದೊಂದಿಗೆ ಈ ಕೆಳಕಂಡ ಶಾಶ್ವತವಾಗಿರುವಂತಹ ಕೆಲಸಗಳನ್ನು ಮಾಡಲು ಹೊರಟಿದ್ದೇವೆ. ಅವುಗಳೆಂದರೆ,
- ಉಭಯ ಶಾಲೆಗಳಿಗೆ ಸುಂದರವಾದ ಕೈತೋಟವನ್ನು ನಿರ್ಮಿಸುವುದು
- ಉಭಯ ಶಾಲೆಗಳನ್ನು ಆಕರ್ಷಕ ಬಣ್ಣಗಳಿಂದ ಅಂದಗೊಳಿಸುಸುದು
- ಉಭಯ ಶಾಲೆಗಳಿಗೆ ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಿಕೊಡುವುದು
- ಉಭಯ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಒದಗಿಸಿಕೊಡುವುದು
- ಉಭಯ ಶಾಲೆಗಳಿಗೆ ಕಂಪ್ಯೂಟರ್, ಪ್ರೊಜೆಕ್ಟರ್ , ಸ್ಕ್ರೀನ್ ಒದಗಿಸಿ ಕೊಡುವುದು
ಪ್ರೌಢಶಾಲೆಗೆ ಸುಸಜ್ಜಿತವಾದ ಸ್ಟೇಜ್ ನಿರ್ಮಿಸಿಕೊಡುವುದು - ಉಭಯ ಶಾಲೆಗಳಿಗೆ ಉತ್ತಮವಾದ ಗ್ರಂಥಾಲಯ ಮತ್ತು ಪ್ರಯೋಗಾಲಯದ ಸೌಲಭ್ಯವನ್ನು ಒದಗಿಸಿಗೊಡುವುದು ಗುರುವಂದನಾ ಕಾರ್ಯಕ್ರಮ
ಈ ಮೇಲ್ಕಂಡ ಕಾರ್ಯಕ್ರಮಗಳನ್ನು ಉಭಯಶಾಲೆಗಳಿಗೂ ಮಾಡಿ ಶತಮಾನೋತ್ಸವ ಮತ್ತು ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲು ಎಲ್ಲ ಹಳೆಯ ವಿದ್ಯಾರ್ಥಿಗಳು ತೀರ್ಮಾನಿಸಿ ಉಭಯ ಶಾಲೆಗಳ ಹಳೆಯ ವಿದ್ಯಾರ್ಥಿಗಳ ಸಂಘವನ್ನು ದಿನಾಂಕ 12-11-2017 ರಂದು ಸಂಘದ ಪ್ರಥಮ ಸಭೆ ಕರೆದು ಸಂಘವನ್ನು ಸ್ಥಾಪನೆ ಮಾಡಲಾಯಿತು ವiತ್ತು ದಿನಾಂಕ 24-01-2018 ರಂದು ಸಂಘವನ್ನು “ಹಳೆಯ ವಿದ್ಯಾರ್ಥಿಗಳ ವೇದಿಕೆ” ಎಂಬ ಹೆಸರಿನಲ್ಲಿ ಸಂಘವನ್ನು ನೋಂದಣಿಮಾಡಿಸಲಾಯಿತು. ರಿ. ನಂ : ಆಖಊಂ/Sಔಖ/317/2017-18