ಹಳೆಯ ವಿದ್ಯಾರ್ಥಿಗಳ ವೇಧಿಕೆ( ರಿ ) , ಶ್ರೀ ಎಲೆಕ್ಟ್ರಾನಿಕ್ಸ್ , ಗಣೇಶ ಪೆಂಡಾಲ್ ಎದುರು, ಹಳೇ ಎಸ್.ಬಿ .ಎಮ್ ರಸ್ತೆ, ಕೊಣನೂರು, ಅರಕಲಗೂಡು( ತಾ ) , ಹಾಸನ( ಜಿಲ್ಲೆ )
ಪಿನ್ ಸಂಖ್ಯೆ : 573130
+919632308778 +919845140763 +919945891145 +919448742467
info@ghp-bsskonanur.org
ಕಾವೇರಿ ನದಿಯ ತಟದಲ್ಲಿ ಕೊಳಲು ಗೋಪಾಲ ಕೃಷ್ಣನ ಸಾನಿಧ್ಯದಲ್ಲಿ ಇರುವಂತಹ ಸುಂದರವಾದ ವಿದ್ಯಾಕಾಶಿ ಎಂಬ ಬಿರುದಾಂಕಿತವಾದ ಕೊಣನೂರಿನ ಶತಮಾನ ಕಂಡಿರುವ ಸರ್ಕಾರಿ ಬಾಲಕರ ಪ್ರಾಥಮಿಕ ಪಾಠ ಶಾಲೆ ಬಿ.ಎಸ್.ಎಸ್ ಸರ್ಕಾರಿ ಪ್ರೌಢಶಾಲೆಯ ಶತಮಾನೋತ್ಸವ ಹಾಗು ವಜ್ರಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲು ಹೊರಟಿದ್ದೇವೆ. ಈ ಉಭಯ ಶಾಲೆಗಳು ಅಸಂಖ್ಯಾತ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಸಾಕಷ್ಟು ವಿದ್ಯಾರ್ಥಿಗಳ ಬಾಳನ್ನು ಹಸನಗೊಳಿಸಲು ಶ್ರಮಿಸಿರುವುದು ಸ್ತುತ್ಯಾರ್ಹ ಅಕ್ಷರ ಕಲಿಸಿ ಎಲ್ಲರ ಬಾಳನ್ನು ಬೆಳಗಿಸಿ ಈ ದೇಶದ ಪ್ರಜ್ಞಾವಂತ ಮತ್ತು ಸುಸಂಸ್ಕೃತ ನಾಗರೀಕರನ್ನಾಗಿಸಲು ಈ ಶಾಲೆಗಳು ಶ್ರಮಿಸಿವೆ. ಅಕ್ಷರ ಕಲಿಸಿ ಬದುಕು ರೂಪಿಸಿದ ಬಾಳನ್ನು ದೀವಿಗೆಯಾಗಿಸಿದ ಈ ಶಾಲೆಗಳ ಶ್ರೇಯೋಭಿವೃದ್ಧಿಗಾಗಿ ಅಸಂಖ್ಯಾತ ವಿದ್ಯಾರ್ಥಿಗಳೆಲ್ಲರು ಸೇರಿ ನಮೆಲ್ಲರ ಜ್ಞಾನದೇಗುಲವನ್ನು ಕೊಣನೂರಿಗೆ ಕಳಶಪ್ರಾಯವಾಗುವಂತೆ ನವೀಕರಿಸುವ ಕಾರ್ಯವನ್ನು ಕೈಗೊಳ್ಳುವ ಸದುದ್ದೇಶದಿಂದ ಹಳೆಯ ವಿದ್ಯಾರ್ಥಿಗಳ ವೇದಿಕೆಯನ್ನು ಪ್ರಾರಂಭಿಸಿ ಕಾರ್ಯಪ್ರವೃತ್ತರಾಗಿದ್ದೇವೆ.